.jpg)
ಕಾರ್ಮಿಕರ ದಿನಾಚರಣೆಯ ದಿನವಾದ "ಮೇ ದಿನದ " ಶುಭಾಶಯಗಳು.
ವಿಶ್ವದ ಮೊದಲನೇ ಕಾರ್ಮಿಕ ದಿನಾಚರಣೆ ಪ್ರಾರಂಭವಾದದ್ದು 1890 ರಲ್ಲಿ . 1886 ರಲ್ಲಿ 8 ಗಂಟೆ ಕೆಲಸದ ಬೇಡಿಕೆ ಇಟ್ಟುಕೊಂಡು ವಿಶ್ವದ ಕಾರ್ಮಿಕರೆಲ್ಲರೂ ಪ್ರತಿಭಟನೆ ಪ್ರಾರಂಭ ಮಾಡಿದಾಗ ಹೇ ಮಾರ್ಕೆಟ್ ನಲ್ಲಿ ನಡೆದ ಪೋಲಿಸ್ ದೌರ್ಜನ್ಯದಲ್ಲಿ ನೂರಾರು ಕಾರ್ಮಿಕರೂ ಮಾತು 07 ಜನ ಪೊಲೀಸರೂ ಮೃತರಾದರು. ನಂತರ ಈ ದೌರ್ಜನ್ಯಕ್ಕೆ ಸಂಬಂಧ ಪಟ್ಟ ಹಾಗೆ ನಡೆಸಿದ ವಿಚಾರಣೆಯಲ್ಲಿ ನಾಲ್ಕು ಜನ ಕಾರ್ಮಿಕ ಮುಖಂಡರನ್ನು - ಆಲ್ಬರ್ಟ್ ಪಾರಸನ್ಸ್, ಆಗಸ್ಟ್ ಸ್ಪೈಸ್ , ಜಾರ್ಜ್ ಎಂಗೆಲ್ ಮತ್ತು ಅದಾಲ್ಪ್ಹ್ ಫಿಷೆರ್ - ಗಲ್ಲಿಗೇರಿಸಲಾಯಿತು.
ಈ ಘಟನೆಯನ್ನು ಖಂಡಿಸಿ ಮೇ 01 1890 ರಲ್ಲಿ ವಿಶ್ವದಾದ್ಯಂತ ನಡೆದ ಕಾರ್ಮಿಕರ ಪ್ರಥಮ ಸಾಮೂಹಿಕ ಪ್ರತಿಭಟನೆಯ ಬೃಹತ್ ಪ್ರದರ್ಶನವೇ ಕಾರ್ಮಿಕ ದಿನಾಚರಣೆಗೆ ನಾಂದಿ. ಇಂದು ಬದಲಾದ ಸನ್ನಿವೇಶದಲ್ಲಿ ಜಗತ್ತಿನ ಕಾರ್ಮಿಕರು ಸಾರ್ವಜನಿಕ ಉದ್ದಿಮೆಗಳಲ್ಲಿನ ಬಂಡವಾಳ ಹಿಂತೆಗೆತ, ಕಡ್ಡಾಯ ನಿವೃತ್ತಿ ಯೋಜನೆಗಳು, ಖಾಯಂ ನೌಕರರ ಜಾಗದಲ್ಲಿ ದಿನಗೂಲಿ ನೌಕರರನ್ನು ಭರ್ತಿ ಮಾಡಿ ಅವರ ಶೋಷಣೆ, ದೇಶಕ್ಕೆ ಮಾರಕ ವಾಗಿರುವ ಹೊಸ ಆರ್ಥಿಕ ನೀತಿಗಳು ಮುಂತಾದವುಗಳ ವಿರುದ್ದ ಕಾರ್ಮಿಕರು ಒಂದಾಗಿ - ಐಕ್ಯ ಹೋರಾಟ ಮಾಡಿ ದೇಶವನ್ನು ರಕ್ಷಿಸಬೇಕಿದೆ. ಆಗ ಮಾತ್ರ ವಿಶ್ವದ ಕಾರ್ಮಿಕರೆ ಒಂದಾಗಿ - ಹೋರಾಟಕ್ಕೆ ಮುಂದಾಗಿ ಎನ್ನುವ ಘೋಷಣೆಗೆ ನಿಜವಾದ ಅರ್ಥ ಬರುತ್ತದೆ.